Ticker

6/recent/ticker-posts

ಬಾಳೊಂದು ಹೋರಾಟ

 ಬಾಳೊಂದು ಹೋರಾಟ 


ಬದುಕುವ  ಜೀವಿಗಳೇ ಆಲಿಸಿರಿ 
ಬಾಳೊಂದು ಹೋರಾಟ ಮರೆಯದಿರಿ 
ಬಾಯಿಗೆ ಮಾಸ್ಕನ್ನು ಹಾಕೊಳ್ರಿ
ಯಾರಿಗೂ ರೋಗನೀವು ಹರಡದಿರಿ.
ನಾಳೆಯ ನಂಬಿಕೆ ಇರಲಿ ನಮ್ಮ 
 ಮನಸಲಿ ಬದುಕುವ ಬರವಸೆಯೊಂದೆ ಉಸಿರಾಗಲಿ 

ಮನವೇ ಓ ಮನವೇ ನೀ ಹೆದರದಿರು ಏನೇ  ಕಾಯಿಲೆ ಬಂದರುನೀ ಕುಗ್ಗದಿರು. ಆ ಆ ಆ...

ಹೃದಯ ಎಂಬ ಗುಂಡಿಗೆಯು
ಒಡೆದು  ಹೋಗಬಾರದು
 ಕೋರೋಣ ಒಂದು ರೋಗ ಎಂದು
ಹೆದರಿ  ಸಾಯಬಾರದು.
ಯಾರಿಗಿಲ್ಲಿ ನೋವಿಲ್ಲ 
ಯಾರಿಗಿಲ್ಲ ಸಾವಿಲ್ಲ  
ಕಾಲ ಕಳೆದ ಹಾಗೆ ಎಲ್ಲ
 ಮಾಯವಾಗುವಂತದು .
 ಎದೆ ಗೊಟ್ಟು ನಿಲ್ಲ ಬೇಕು. 
ಯಾವ ರೋಗ ಬಂದರುನು.
ಜ್ವರ ಕೆಮ್ಮು ಬಂದರೆ ನೀವು  
ಪರೀಕ್ಷೆ ಮಾಡಿಸಿಕೊಳ್ಳಬೇಕು 

ಪೊಲೀಸರಿಗಿಲ್ಲಿ  ಅಲೆದಾಟ 
ರೋಗಿಗಿಲ್ಲಿ      ಪರದಾಟ
ನೀವು ಅತಿ ಬೇಗ  ವೈದ್ಯರ ಹತ್ತಿರ 
 ಬಂದ್ರೆ  ಒಳ್ಳೆ ಕಾಲ ಮುಂದೆ ಇದೆ

ಮನವೇ ಓ ಮನವೇ ನೀ ಅಳುಕದಿರು 
ನಗುತಾ ನಗು ನಗುತಾ
ನೀ ಬಾಳುತಿರು.ಆ  ಆ ಆ ಆ ....

ರೋಗ ರೂಜಿನಿ ಅನ್ನೋದು 
ದೇಹಕ್ಕೆ ಬಂದೆ ಬರುವುದು 
ಮನೆಯೊಳಗೆ ಎಲ್ಲರೂ ಇದ್ದು 
ನಗುತ  ಇರಲಿ  ಹಗಲಿರುಳು
ಏನೇ ಬರಲಿ ದೇಹದಲ್ಲಿ
 ವ್ಯಾಕ್ಸಿನ  ಎರಡು ಹಾಕಿಸಿರಿ
ನೋವು ನಲಿವು  ಎಲ್ಲ ಮೀರಿ 
ಬದುಕು ತಿವಿ   ನಾವುಗಳು 

ಕೋರೋಣ ಬರುವುದುಂಟು 
ಈ ಲೋಕದ ಜನರಿಗೆ 
ನಾವೆಲ್ಲರೂ ಎಂದು ಒಂದೇ 
ಈ ರೋಗದ ದೃಷ್ಟಿಯಲಿ
ಬಾಳಿಗೊಂದು ಅರ್ಥವಿದೆ 
ಹೆಜ್ಜೆ ಗೊಂದು  ದಾರಿ ಇದೆ 
ನಿಮ್ಮ ಆತ್ಮ ಬಲ  ನಿಮ್ಮ ಜೊತೆ  ಇರಲಿ 
ನಿಮ್ಮ ಜೀವ ನಿನ್ನ ಕೈಲಿ 

ಮನವೇ ಓ ಮನವೇ ನೀ ಬದಲಾಗು  
ಬದುಕಿ ಬಾಳಲು ನೀ ತಯಾರಾಗು 
ಆ ಆ ಆ ಆ ಆ ...........

ಮಾಸ್ಕ್ ಧರಿಸಿ,ಕೋರೋಣ ಓಡಿಸಿ, ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ

ಸ್ವ ರಚನೆ :- ಮಲ್ಲಮ್ಮ ರ ನೀರಲಗಿ.