Ticker

6/recent/ticker-posts

ಹುಚ್ಚು ಮನಸಿನ ಇಪ್ಪತ್ತು ಮುಖಗಳು



ಮನಸು ಎಂತಹ ಮಾಧ್ಯಮವೆಂದರೆ ಮೂರು ಅಕ್ಷರದ ಈ ಪದ ಮೂರು ಲೋಕದ ಎಲ್ಲವನ್ನೂ ವಶಕ್ಕೆ ತೆಗೆದುಕೊಳ್ಳ ಬಲ್ಲ ದಿವ್ಯ ಶಕ್ತಿ.

ಮನಸ್ಸೇನಾದರೂ ಮನಸ್ಸು ಮಾಡಿದರೆ ನಾವು ಒಂದೇ ಜನ್ಮದಲ್ಲಿ ಮೂರು ಲಕ್ಷ ವ್ಯಕ್ತಿತ್ವ ಹೊಂದಬಹುದು,ಅದು ಹೆಚ್ಚೂ ಆಗಬಹುದು ಕಡಿಮೆಯೂ ಆಗಬಹುದು,ಬಹಳಷ್ಟು ಸಂದರ್ಭದಲ್ಲಿ ಮನಸು ಒಂದು ಗಾಜಿನ ಕನ್ನಡಿಯಂತೆ ವರ್ತಿಸುತ್ತದೆ,ಎಷ್ಟೇ ದಪ್ಪ ಮತ್ತು ದೊಡ್ಡ ಕನ್ನಡಿಯಾದರೂ ಒಂದು ಸಣ್ಣ ಕಲ್ಲಿನಂತಹ ಭಾವೋನ್ಮಾದಕ್ಕೆ ಬಲಿಯಾಗಿ ಬಿಡುತ್ತದೆ ಆ ಒಂದು ಕನ್ನಡಿಯ ಒಡೆದ ಎಲ್ಲ ಚೂರು ಕೂಡ ಮನುಷ್ಯನ ಪ್ರತಿಬಿಂಬ ತೋರುವುದಾಗಿದ್ದರೆ ಅದೇ ನೋಡಿ ಸಮಸ್ಯೆ!ಕಾರಣ ನಮ್ಮ ಪ್ರತಿಬಿಂಬ ನಮ್ಮ ಮಾತು ಕೇಳೋಲ್ಲ!

ಇದನ್ನು ಭಾಗ್ಯವಾಗಿಯೂ ಬದಲಾಯಿಸಬಹುದು,ದೇವನೂರು ಮಹಾದೇವ ಅವರು

ತಮ್ಮ ಎದೆಗೆ ಬಿದ್ದ ಅಕ್ಷರದಲ್ಲಿ ಹೀಗೆ ಹೇಳುತ್ತಾರೆ "ಒಂದು ಮನುಷ್ಯ ತನ್ನ ಜೀವಿತದಲ್ಲಿ ಎಷ್ಟು ಮಾಧ್ಯಮವಾಗಬಲ್ಲನೋ

ಅದಷ್ಟನ್ನೂ ಸಾಧಿಸಿದವರು ರಾಮಕೃಷ್ಣ ಪರಮಹಂಸರು"ಎಂದು ಅದು ದಿಟವೇ!ಕಾಳಿಗೆ ಪೂಜೆ ಮಾಡುವಾಗ ಭಕ್ತನಾಗಿ,

ಕೃಷ್ಣನಿಗೆ ಅರ್ಚಿಸುವಾಗ ಅವನ ಪ್ರೇಯಸಿ ರಾಧೆಯಾಗಿ,ಸಾಧಕರಿಗೆ.ಗುರುವಾಗಿ ಪರಿಪೂರ್ಣ ಜೀವನ ಅನುಭವಿಸಿದವರು ಅವರು,ಅವರಿಗೆ ಮುಟ್ಟಿನ ಅನುಭವವೂ ಅವರು ತಮ್ಮನ್ನು ರಾಧೆ ಎಂದುಕೊಂಡಾಗ ಆಗುತ್ತಿತ್ತು ಎನ್ನುವುದು ಹಿಂದೆ ನಾನು

ರಾಮಕೃಷ್ಣ ಮಿಷನ್ ನ ಒಬ್ಬರ ಲೇಖನದಲ್ಲಿ  ಓದಿದ್ದೇನೆ!

ಇದೇ ಪರಿಣಾಮ ನಕಾರಾತ್ಮಕವಾಗಿ ಇದ್ದರೆ!

ಬಹುಮುಖಿ ವ್ಯಕ್ತಿತ್ವ ಒಂದು ಸಶಕ್ತ ಕತ್ತಿ!ಕಾರ್ಯಸಾಧನೆಗೂ,ವಿಕಾರಯಾತನೆಗೂ

ಉಪಯೋಗಿಸಲ್ಪಡುವ ಒಂದು ಹರಿತವಾದ ಕತ್ತಿ!

ಒಬ್ಬ ಮನುಷ್ಯ 20 ಅವತಾರ ಹೊಂದಿದ್ದ!  ಇದು ನಿಜ.

ಗಂಗಾ ನಾಗವಲ್ಲಿ ಹಾಗೆ ಬದಲಾಗಿದ್ದು,ಅನ್ನಿಯನ್ ನಲ್ಲಿ ಅಂಬಿ ರೆಮೋ ಆಗಿದ್ದು ಇದನ್ನೆಲ್ಲ ನಾವು ನೋಡುತ್ತಾ ಬೆಳೆದಿದ್ದೇವೆ.


ಇವೆಲ್ಲಕ್ಕಿಂತ ಮಿಗಿಲಾದವನು"ಬಿಲ್ಲಿ ಮಿಲಿಗನ್" ಇಪ್ಪತ್ತು ವಿವಿಧ ವ್ಯಕ್ತಿತ್ವವನ್ನು ಹೊಂದಿದ್ದ.

ಮನೆಯ ವಾತಾವರಣವೇ ಮನಸಿನ ಮೊದಲ ಪೋಷಕ ಮತ್ತೆ ಘಾತಕ.ಬಿಲ್ಲಿ ಮಿಲಿಗನ್ ಅದಕ್ಕೆ ಹೊರತಲ್ಲ,ಅವನ ಬಾಲ್ಯದಲ್ಲಿ ಅಪ್ಪ ಅಮ್ಮ ಬೇರೆ ಆಗಿ ಅಮ್ಮ ಒಬ್ಬನ ಜೊತೆ ಸಂಸಾರ ನಡೆಸುತ್ತಿದ್ದಳು,ಅವಳು ಗಾಯಕಿಯಾಗಿದ್ದಳು ಆದರೆ ಗಂಡ ಕುಡುಕ ಮನೆಯಲ್ಲಿ ನಿತ್ಯ ಜಗಳ ತುಂಬಾ ಗಲಾಟೆಯಾಯಿತು,ಬಿಲ್ಲಿ ಮಿಲಿಗನ್ ಕುಗ್ಗುತ್ತಾ ಹೋದ,ಖಿನ್ನನಾದ.

ಅವನು ಪ್ರಾಯಕ್ಕೆ ಬಂದಾಗ ಓಹಿಯೋದಲ್ಲಿ ವಾಸಿಸುತ್ತಿದ್ದ.ತುಂಬಾ ಕಾದಂಬರಿ ಓದುತ್ತಿದ್ದ ಆತ ಆ ಪಾತ್ರಗಳಲ್ಲಿ ಬದಲಾಗಿ ದರೋಡೆ,ಲೂಟಿ ಮಾಡುತ್ತಿದ್ದ‌.ತನ್ನನ್ನು ತಾನು"ರಾಬಿನ್ ಹುಡ್"ಎಂದುಕೊಂಡಿದ್ದ ಈತ ಓಹಿಯೋ ಯೂನಿವರ್ಸಿಟಿಯ ಮೂರು ಮಂದಿ ಹುಡುಗಿಯರನ್ನು ಅಪಹರಿಸಿ ದೋಚಿದ.ಆಶ್ಚರ್ಯವೆಂದರೆ ಅದರಲ್ಲಿ ಇಬ್ಬರನ್ನು ಮಾತ್ರ ರೇಪ್ ಮಾಡಿದ್ದ,ಸಂತ್ರಸ್ತೆಯರನ್ನು ಪರಿಶೀಲಿಸಿದಾಗ ಅಪರಾಧಿಯ ಬಗ್ಗೆ ಅವರು ಹೇಳಿದ್ದು,ಒಬ್ಬಳ ಕಂಪ್ಲೇಟ್ ಪ್ರಕಾರ ಅವನು ಜರ್ಮನ್ ಮನುಷ್ಯ,ಇನ್ನೊಬ್ಬಳ ಪ್ರಕಾರ ವಿಕೃತ ಕಾಮಿ,ಮತ್ತೊಬ್ಬಳ ಪ್ರಕಾರ ತನ್ನ ಮೈಯನ್ನೂ ಮುಟ್ಟದೆ ಹಣವನ್ನಷ್ಟೇ ತೆಗೆದುಕೊಂಡು ಸಂಭಾವಿತನ ರೀತಿ ತುಂಬಾ ಪ್ರೀತಿಯಿಂದ ನೋಡಿಕೊಂಡವನಾಗಿದ್ದ.ಪ್ರತಿ ಇಪ್ಪತ್ತು ಅವತಾರಗಳಿಗೂ ವಿಶೇಷ ಬಟ್ಟೆ,ನಡವಳಿಕೆ!ಪೋಲಿಸರಿಗೆ ಅಕ್ಷರಶಃ ತಲೆನೋವಾಗಿದ್ದ .

ಅವನಿಗೆ ಗೊತ್ತಿರದ ಕಲೆಯೂ ಇರಲಿಲ್ಲ,ಅದರ ಸದ್ಬಳಕೆ,ದುರ್ಬಳಿಕೆ ಎರಡನ್ನೂ

ಮಾಡಿದವನು ಇವನು.ಹಾಗೂ ಹೀಗೂ ಒಮ್ಮೆ ಸಿಕ್ಕಿಬಿದ್ದ

ನಂತರ ಅವನನ್ನು ಪೋಲಿಸ್ ಕಸ್ಟಡಿಯಿಂದ ಸೈಕಾಟ್ರಿಸ್ಟ್ ಗಳ ತೆಕ್ಕೆಗೆ ಕೊಡಲಾಯಿತು ಅಲ್ಲಿ ಅವನು ಸುಮಾರು ಹದಿನೆಂಟು ವ್ಯಕ್ತಿಗಳಾಗಿ ಬದಲಾಗುವುದನ್ನು ಸೈಕಾಟ್ರಿಸ್ಟ್ ಗಳು ದಾಖಲಿಸಿದ್ದರು,ಒಬ್ಬ ಇಂಗ್ಲೀಷ್ ಮ್ಯಾನ್,ಒಬ್ಬ ಸಂಗೀತಗಾರ,ಒಬ್ಬ ಸೈಂಟಿಸ್ಟ್,ಒಬ್ಬ ಕಮ್ಯೂನಿಸ್ಟ್,ಒಬ್ಬ ಜರ್ಮನ್,ಒಬ್ಬ ಆರ್ಟಿಸ್ಟ್,ಒಬ್ಬ ಮೆಡಿಸಿನಿಸ್ಟ್,ಒಬ್ಬ ಮೃದು ವ್ಯಕ್ತಿ,ಒಬ್ಬ ವಿಕೃತ ಕಾಮಿ ಹೀಗೆ ಇದರಲ್ಲಿ ಒಂದು ಲೆಸ್ಬಿಯನ್ ಅವತಾರ ಅವರಿಬ್ಬರನ್ನು ರೇಪ್ ಮಾಡಿತ್ತು ಎಪ್ಪತ್ತರ ದಶಕದಿಂದ ಎಂಬತ್ತರ ದಶಕದ ತನಕ ನಡೆದ ಈ ಜಟಾಪಟಿಯ ನಂತರ ಅವನನ್ನು ಬಿಡುಗಡೆಗೊಳಿಸಿದರೂ ಅವನ ಮನಸು ಪೂರ್ತಿ ಗುಣವಾಗಲಿಲ್ಲ,ಕೊನೆಗೆ ಕ್ಯಾನ್ಸರ್ ನಲ್ಲಿ ಅವ ತೀರಿಹೋದ ಇವನ ಮೇಲೆ ಪುಸ್ತಕ ಮತ್ತೆ ಸಿನಿಮಾ ಇದೆ‌.

ಮಿಲಿಗನ್ ಪ್ರತಿ ಮನುಷ್ಯನಲ್ಲೂ ಇದಾನೆ,ಅದರಲ್ಲೂ ಪ್ರತಿ ಭಾರತೀಯಲ್ಲೂ!ಏಕೆಂದರೆ ದಿನ ಎದ್ದರೆ ನಮಗೆ

ಜಂಜಾಟ ತೀರ ಊಟದಷ್ಟೇ ಸಾಮಾನ್ಯ!

ಆದರೆ ಪ್ರತಿ ಭಾರತೀಯನೂ ಮಿಲಿಗನ್ ಆಗಲ್ಲ,ಯಾಕೆಂದರೆ ಇಲ್ಲಿ ಪಾಶ್ಚಾತ್ಯರ ರೀತಿಯ ನಿರ್ಭಾವುಕ ಜೀವನವಿಲ್ಲ.

ನನ್ನದೆಷ್ಟೋ ಕೆಟ್ಟ ಜೀವನ ಎಂದು ಕೊಂಡಾಗಲೇ ತುತ್ತು ಅನ್ನಕ್ಕೆ ಪರದಾಡುವವರನ್ನ ಕಂಡು ಸಮಾಧಾನ ಪಡುತ್ತೇವೆ,ನಮ್ಮ ಮಾತು ಕೇಳಿಸಿಕೊಳ್ಳಲು ಯಾರೂ ಇಲ್ಲ ಎಂದಾಗೊಮ್ಮೆ ಬೀದಿ ನಾಯಿಯೊಂದು ನನ್ನ ಪ್ರೇಕ್ಷಕನಾಗುತ್ತದೆ.☺