Ticker

6/recent/ticker-posts

ಕೋವಿಡ್ ನಿಯಂತ್ರಣಕ್ಕೆ 'ತ್ರಿ' ಸೂತ್ರ ಜಾರಿ

ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರವನ್ನು ಕಡಿಮೆ ಮಾಡಲು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ತ್ರಿ ಸೂತ್ರ ಯೋಜನೆಗೆ ಒತ್ತು ನೀಡಿದ್ದಾರೆ.
ಜಿಲ್ಲೆಯ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಬೆಡ್ ಹೆಚ್ಚಳ ಮಾಡುವುದು, ಸೋಂಕು ನಿಯಂತ್ರಣ ಹಾಗೂ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ವಿಧಿಸುವುದು ತ್ರಿ ಸೂತ್ರದ ಪ್ರಮುಖ ಅಂಶಗಳಾಗಿವೆ.
ಇದೇ ಮಾದರಿ ಅನ್ವಯ ಒಂದು ಗ್ರಾಮ ಅಥವಾ ವಾರ್ಡ್ ನಲ್ಲಿ 40ಕ್ಕಿಂತ ಹೆಚ್ಚು ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದ್ದರೆ ಅಂತಹ ಗ್ರಾಮವನ್ನು ವಿಶೇಷ ಕಂಟೈನ್ ಮೆಂಟ ವಲಯ ಎಂದು ಘೋಷಿಸಲಾಗುತ್ತದೆ.
ಕಂಟೈನ್ ಮೆಂಟ್ ಏಕೆ ಮಾಡಲಾಗುತ್ತದೆ?
40ಕ್ಕಿಂತ ಹೆಚ್ಚಿನ ಜನರಿಗೆ ಕೋವಿಡ್ ಸೋಂಕು ತಗುಲಿದ್ದರಿಂದ, ಇಂದೂರ ಗ್ರಾಮವನ್ನು ರವಿವಾರ ಬೆಳಿಗ್ಗೆಯಿಂದ ಸೀಲ್ ಡೌನ್ ಮಾಡಲಾಗಿದೆ.
ವಿಶೇಷ ಕಂಟೈನ್ ಮೆಂಟ್ ವಲಯ ಎಂದು ಇಂದೂರ ಗ್ರಾಮವನ್ನು ಶನಿವಾರ ಜಿಲ್ಲಾಧಿಕಾರಿ ಘೋಷಣೆ ಮಾಡಿದ್ದರು. ಅದರಂತೆ ಕಂಟೈನ್ ಮೆಂಟ್ ವಲಯದಲ್ಲಿ ತಾಲೂಕು ಆಡಳಿತ ಬಿಗಿ ಕ್ರಮ ಕೈಗೊಂಡಿದೆ.
ಇಂದೂರ ಗ್ರಾಮದಲ್ಲಿ 75ಜನರಿಗೆ ಕೋವಿಡ್ ಸೋಂಕು ತಗುಲಿದ್ದು, ಸದ್ಯ 24ಸಕ್ರಿಯ ಪ್ರಕರಣಗಳಿವೆ. ಕೋವಿಡ್ ನಿಂದ ಇದೇ ಗ್ರಾಮದಲ್ಲಿ ಒಂದು ಸಾವು ಸಂಭವಿಸಿದೆ. ಇನ್ನೂ ಹಲವು ಜನರ ಕೋವಿಡ್ ಪರೀಕ್ಷಾ ವರದಿ‌ ಬರುವುದು ಬಾಕಿಯಿದೆ.
'ಗ್ರಾಮದಲ್ಲಿ ಅನಗತ್ಯವಾಗಿ ಯಾರೂ ಓಡಾಡಬಾರದು ಎಂದು ಸೂಚಿಸಲಾಗಿದ್ದರೂ ಸಹಿತ, ಕೃಷಿ ಚಟುವಟಿಕೆಗಳಿಗೆ ಬೆಳಿಗ್ಗೆ 6-9ಗಂಟೆ ವರೆಗೆ ಬಿಡುವು ನೀಡಲಾಗಿದೆ. ದಿನಸಿ ಸಾಮಗ್ರಿ, ತರಕಾರಿ, ಹಣ್ಣು ಹಂಫಲ ಪೂರೈಕೆಗೆ ವಾಹನವನ್ನು ನಿಗದಿಗೊಳಿಸಲಾಗಿದೆ. ವೈದ್ಯಕೀಯ ಹಾಗೂ ತುರ್ತು ಕೆಲಸಗಳಿಗೆ ಅವಕಾಶ ನೀಡಲಾಗುವುದು' ಎಂದು ಪಿಡಿಓ ವೆಂಕಪ್ಪ ಲಮಾಣಿ 'ನ್ಯೂಸ್@ಮುಂಡಗೋಡ' ಕ್ಕೆ ತಿಳಿಸಿದ್ದಾರೆ.

ಇಂದೂರ ಗ್ರಾಮ ವನ್ನು ಸೀಲ್ ಡೌನ್ ಮಾಡಿರುವುದು