ಯಸ್ಯಾಂ ದತ್ತಮ್ ಹತಮ್ ಜಪ್ತಮ್ ಸರ್ವಂ ಭವತು
ಚ ಅಕ್ಷಯಮ್
ಈ ದಿನದಂದು ಏನನ್ನು ದಾನ , ತ್ಯಾಗ , ಪಠಣ ಮಾಡುತ್ತೀರೋ ಅವು ಅಕ್ಷಯವಾಗುತ್ತವೆ .
ದರ್ಶ ಅಮವಾಸ್ಯೆ ಕಳೆದು ಮೂರನೇ ದಿನಕ್ಕೆ ಅಕ್ಷಯ ತೃತೀಯ ಬರುತ್ತದೆ
ಕ್ಷಯ ಎಂದರೆ ನಾಶವಾಗುವುದು ಅಂತ ಅರ್ಥ ಆಂಜನೇಯನ ಕುರಿತು ಇರುವ
ಕಾರ್ಯಸಿದ್ಧಿ ಹನುಮಾನ್ ಮಂತ್ರದಲ್ಲಿ ದುಃಖ ಕ್ಷಯ ಕರೋ ಭವ ಎಂದು ಆಂಜನೇಯನನ್ನು ಪ್ರಾರ್ಥಿಸುತ್ತಾರೆ.
ಎಂದರೆ ದುಃಖವೆಲ್ಲ ನಾಶವಾಗಲಿ ಎಂದು ಅದರ ವಿರುದ್ಧ ಪದವೇ "ಅಕ್ಷಯ"
ಅಂದರೆ ನಾಶವಿರಲಾರದು,ಅನಂತವಾಗಿದ್ದು ಎಂದರ್ಥ.
ಸೋಮವಾರ ದಿನ ರೋಹಿಣಿ ನಕ್ಷತ್ರದಲ್ಲಿ ತೃತೀಯ ತಿಥಿಯ ದಿನ ಈ ಹಬ್ಬ ಬಂದರೆ ಅದು
ಅತೀ ಪ್ರಾಶಸ್ತ್ಯವುಳ್ಳದ್ದು. ನಾಳೆ ಶುಕ್ರವಾರ ಈ ಹಬ್ಬದ ಆಗಮನವಾಗಿದೆ.
ಇದರ ಹಿನ್ನಲೆ ಗಮನಿಸಿದಾಗ
ಧರ್ಮಜ (ಯುಧಿಷ್ಠಿರ)ನು ಸೂರ್ಯನನ್ನು ಕುರಿತು ತಪಸ್ಸು ಮಾಡಿ ಇದೇ ದಿನದಂದು
"ಅಕ್ಷಯ ಪಾತ್ರೆ"ಯನ್ನು ಪಡೆಯುತ್ತಾನೆ,ಮತ್ತು ಇದೇ ದಿನ ಅತಿಥಿ ಸತ್ಕಾರಕ್ಕೆ ಹೆಸರಾದ ಭಾರತದಲ್ಲಿ ದುರ್ವಾಸರು ತಮ್ಮ
ನೂರು ಶಿಷ್ಯರೊಂದಿಗೆ ಪಾಂಡವರ ಕುಟೀರಕ್ಕೆ ಬಂದಾಗ ದ್ರೌಪದಿಯ ಊಟ ಮುಗಿದ ಮೇಲೆ
ಅಕ್ಷಯ ಪಾತ್ರೆಯಲ್ಲಿ ಮತ್ತೆ ಅನ್ನ ಉತ್ಪತ್ತಿಯಾಗುವುದಿಲ್ಲ ಎಂಬ ವಿಷಯದಿಂದ ಪಾಂಡವರು ನೊಂದು ದ್ರೌಪದಿ ಕೃಷ್ಣನ
ಸ್ಮರಿಸಿದಾಗ ಅವನು ಒಂದು ಅಕ್ಷಯ ಪಾತ್ರೆಯಲ್ಲುಳಿದ ಕೊನೆ ಅಗಳನ್ನು ತಿಂದು ಅಲ್ಲಿ ಬಂದ ದುರ್ವಾಸರ ಮತ್ತು ಅವರ ಶಿಷ್ಯರ ಹಸಿವು ತಣಿಸಿದ ದಿನ.
ಹಾಗೆಯೇ ಮಹಾವಿಷ್ಣುವಿನ ಆರನೇ ಅವತಾರವಾದ ಪರಶುರಾಮ ದೇವರು ಜಮದಗ್ನಿ ರೇಣುಕೆಯರ ಮಗನಾಗಿ ಭೂಮಿಯಲ್ಲಿ ಅವತಾರವೆತ್ತಿದ ದಿನವೂ ಇದೇ ಆಗಿದೆ!
ಕೃಷ್ಣನನ್ನು ಸುದಾಮ ಭೇಟಿ ಆದ ದಿನ ಮತ್ತೆ ಭಗವಾನ್ ವೇದವ್ಯಾಸರು ಮಹಾಭಾರತ ಗ್ರಂಥವನ್ನು ಗಣೇಶನ ಸಹಕಾರದೊಂದಿಗೆ ಬರೆಯಲು ಶುರು ಮಾಡಿದ ದಿನವೂ ಇಂದೇ ಆಗಿದೆ.
ಅಲ್ಲದೇ ಜಗಜ್ಯೋತಿ ಬಸವಣ್ಣನವರು ಅಕ್ಷಯ ತೃತೀಯದಂದೇ ಭೂಮಿಗೆ ಬಂದರು.
ಒಂದು ಬಿನ್ನವವೇನೆಂದರೆ ಸಾವಿರಾರು ಹಿಂದೂಗಳು ಈ ಹಬ್ಬದಂದು ಆಭರಣದಂಗಡಿಗೆ ತೆರಳಿ
ಚಿನ್ನ ಖರೀದಿ ಮಾಡುತ್ತಾರೆ,ಅದು ತಪ್ಪೇನು ಅಲ್ಲ,ಅಂದು ಮಾಡುವ ಕ್ರಿಯೆ ಅಕ್ಷಯವಾಗುತ್ತದೆ ಎಂದು.
ಆದರೆ ನಿಜವಾದ ಸಂಪತ್ತು ಜ್ಞಾನ ಅದನ್ನು ಪಡೆಯಲು ಭಾರತೀಯರು ಆಸಕ್ತಿ ವಹಿಸಿದಷ್ಟೂ
ಅವರು ಸಂಪನ್ಮೂಲವಾಗಿ ಭಾರತಕ್ಕೆ ಕೊಡುಗೆಯಾಗುತ್ತಿರೆ. ಆದ್ದರಿಂದ ನಾಳೆ ಯಾವುದಾದರೂ
ಗ್ರಂಥಗಳ ಅಧ್ಯಯನದ ಮೂಲಕ ಅಕ್ಷಯ ತೃತೀಯವನ್ನು ಬರಮಾಡಿಕೊಳ್ಳೋಣವೇ?!
ನಮ್ಮ ಸೋಶಿಯಲ್ ಮೀಡಿಯಾ ಖಾತೆಗಳು