Ticker

6/recent/ticker-posts

ಕೋವಿಡ್ ಕೇರ್ ಸೆಂಟರಗೆ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಭೇಟಿ

ಮುಂಡಗೋಡದ ಕೋವಿಡ್ ಕೇರ್ ಸೆಂಟರಗೆ ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಬುಧವಾರ ಭೇಟಿ ನೀಡಿದರು.
ಕೋವಿಡ್ ಕೇರ ಸೆಂಟರನ ಪ್ರತಿ ವಾರ್ಡಿಗೂ ಭೇಟಿ ನೀಡಿ, ಅಲ್ಲಿ ಕೈಗೊಂಡಿರುವ ಸಿದ್ಧತೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕೋವಿಡ್ ಸೆಂಟರನಲ್ಲಿ ಇರುವ ಸೋಂಕಿತರ ಆರೋಗ್ಯ ವಿಚಾರಿಸಿ, ಧೈರ್ಯದಿಂದ ಇದ್ದು ಗುಣಮುಖರಾಗುವಂತೆ ಹೇಳಿದರು. 
ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಿರಸಿ ಹಾಗೂ ಮುಂಡಗೋಡ ತಾಲ್ಲೂಕುಗಳಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಸ್ವಲ್ಪ ಹೆಚ್ಚಿದೆ. ಆದರೆ ಪರಿಸ್ಥಿತಿ ನಿಯಂತ್ರಣದಲ್ಲಿದೆ.  ಒಂದು ಮನೆಯಲ್ಲಿ ಒಬ್ಬ ಸದಸ್ಯ ಪಾಸಿಟಿವ್ ಬಂದರೆ, ಅವರನ್ನು    ಕಡ್ಡಾಯವಾಗಿ ಇಲ್ಲಿನ ಕೋವಿಡ್ ಆರೈಕೆ ಕೇಂದ್ರಕ್ಕೆ  ತರಲಾಗುವುದು ಎಂದು ಎಸಿ ಆಕೃತಿ ಬನ್ಸಾಲ್ ಹೇಳಿದರು.
ತಹಶೀಲ್ದಾರ ಶ್ರೀಧರ ಮುಂದಲಮನಿ, ತಾಲ್ಲೂಕು ಆಸ್ಪತ್ರೆಯ ಆಡಳಿತ ಅಧಿಕಾರಿ ಡಾ.ಎಚ್.ಎಫ್ ಇಂಗಳೆ,  ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ,  ಉಪತಹಶೀಲ್ದಾರ ಜೆ.ಬಿ.ಭಟ್ ಈ ಸಂದರ್ಭದಲ್ಲಿ ಇದ್ದರು.