Ticker

6/recent/ticker-posts

ಉತ್ತರ ಕನ್ನಡ ಜಿಲ್ಲೆಯ ಪಿಎಚ್‍ಸಿ ಗಳಿಗೆ 53 ವೈದ್ಯರ ನೇಮಕ

ಮುಂಡಗೋಡ:ಉತ್ತರ ಕನ್ನಡ ಜಿಲ್ಲೆಯ 53 ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಎಂ.ಬಿ.ಬಿ.ಎಸ್ ಪದವಿ ಮುಗಿಸಿರುವ ವೈದ್ಯರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಅವರು, ಜಿಲ್ಲೆಗೆ ವೈದ್ಯರ ನೇಮಕ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರೊಂದಿಗೆ ನಿರಂತರ ಮಾತುಕತೆ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ಆರೋಗ್ಯ ಸುಧಾರಣೆಗೆ ರಾಜ್ಯ ಸರ್ಕಾರ ಒತ್ತು ನೀಡಿದ್ದು, ಎಂ.ಬಿ.ಬಿ.ಎಸ್ ವೈದ್ಯರನ್ನೇ ನೇಮಕ ಮಾಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.


ಉತ್ತರ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ 53 ವೈದ್ಯರ ನೇಮಕ ಮಾಡಿದ್ದಕ್ಕೆ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರಿಗೆ ಅಭಿನಚಿದನೆ ಸಲ್ಲಿಸಿದ್ದಾರೆ. 

ಮುಂಡಗೋಡ ತಾಲೂಕಿಗೆ ನಾಲ್ಕು ವೈದ್ಯರು:ಮುಂಡಗೋಡ ತಾಲೂಕಿನ ನಾಲ್ಕು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಎಂಬಿಬಿಎಸ್ ವೈದ್ಯರ ನೇಮಕ ಮಾಡಲಾಗಿದೆ. ಇದರಲ್ಲಿ ಮಳಗಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ಶಿಫಾ ಮುಜಾವರ್, ಅರಿಶಿಣಗೇರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ಸಂತೋಷಕುಮಾರ ನಾಯ್ಕ, ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ಡಿ.ಟಿ.ಭರತ್, ಕಾತೂರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾ.ನಯನಾ ಎಂ.ಎಸ್ ನೇಮಕ ಆಗಿದ್ದಾರೆ.