Ticker

6/recent/ticker-posts

ಮುಂಡಗೋಡ ತಾಲೂಕಿನಲ್ಲಿ 500ರ ಗಡಿ ದಾಟಿದ ಸಕ್ರಿಯ ಸೋಂಕಿತರ ಸಂಖ್ಯೆ!

ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗಿದೆ. ಮುಂಡಗೋಡ ತಾಲೂಕಿನಲ್ಲಿ ಶುಕ್ರವಾರ 76 ಜನರಿಗೆ ಕೋವಿಡ್ ಖಚಿತಗೊಂಡಿದೆ. ಇದರಿಂದ ತಾಲೂಕಿನಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 500 ಗಡಿ ದಾಟಿದೆ!
ಟಿಬೇಟಿಯನ್ ಕಾಲೋನಿಯಲ್ಲಿ ಅತಿ ಹೆಚ್ಚು 26 ಪ್ರಕರಣಗಳು ಶುಕ್ರವಾರ ಒಂದೇ ದಿನ ವರದಿಯಾಗಿವೆ.
ಮಳಗಿಯಲ್ಲಿ 15ಜನರಿಗೆ ಪಾಸಿಟಿವ್: ಇದೇ ಮೊದಲ ಬಾರಿಗೆ ಮಳಗಿ ಗ್ರಾಮದ 15 ಜನರಿಗೆ ಕೋವಿಡ್ ಸೋಂಕು ತಗುಲಿದೆ. ಇದರಲ್ಲಿ  ಐದು ಮನೆಗಳಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿರುವ  ಸಂಬಂಧಿಕ ಕುಟುಂಬದ 15 ಜನರಿಗೂ ಕೋವಿಡ್ ಪಾಸಿಟಿವ್ ಬಂದಿರುವುದು ವಿಶೇಷ.
 ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರದೀಪ  ಹಾಗೂ ಪಿ.ಡಿ.ಒ ಅಣ್ಣಪ್ಪ ವಡ್ಡರ್   ಅವರು, ಸೋಂಕಿತರ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಮನೆಯಿಂದ ಯಾರೂ ಹೊರಬರದಂತೆ ಹಾಗೂ ಅಗತ್ಯ ವಸ್ತುಗಳು ಬೇಕಿದ್ದರೆ ಕರೆ ಮಾಡುವಂತೆ ತಿಳಿಸಿದ್ದಾರೆ. ಸೋಂಕಿತರಿಗೆ ಯಾವುದೇ ಗುಣಲಕ್ಷಣ ಇಲ್ಲವೆಂದು ತಿಳಿದುಬಂದಿದೆ.

ಮಳಗಿ ಗ್ರಾ.ಪಂ.ಅಧ್ಯಕ್ಷರು ಹಾಗೂ ಪಿ.ಡಿ.ಒ ಸೋಂಕಿತರಿಗೆ ಧೈರ್ಯ ತುಂಬಿದರು
ಎಲ್ಲೆಲ್ಲಿ ಪಾಸಿಟಿವ್ ಬಂದಿದೆ: ಕಾವಲಕೊಪ್ಪ 4, ಉಗ್ಗಿನಕೇರಿ 3, ಇಂದಿರಾ ನಗರ3, ಚಿಗಳ್ಳಿ 2, ಕಾತೂರ 2, ಸಾಲಗಾಂವ , ಹೊಸ ಸಾಲಗಾಂವ , ನ್ಯಾಸರ್ಗಿ ಪ್ಲಾಟ್, ಮಜ್ಜಿಗೇರಿ, ಬಾಚಣಕಿ, ಪಾಳಾ, ಮಲವಳ್ಳಿ, ಅಗಡಿ ಹಾಗೂ ಶಿಂಗನಳ್ಳಿ ಗ್ರಾಮದಲ್ಲಿ ತಲಾ ಒಂದೊಂದು ಪಾಸಿಟಿವ್ ಪ್ರಕರಣ ವರದಿಯಾಗಿವೆ.
ಮುಂಡಗೋಡದ ಪಟ್ಟಣದ ಗಣೇಶ ನಗರ, ಲಮಾಣಿತಾಂಡಾ, ನೆಹರುನಗರ, ಕಂಬಾರಗಟ್ಟಿ ಪ್ಲಾಟ್ ನ ಒಟ್ಟು 5 ಜನರಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ.