Ticker

6/recent/ticker-posts

ಮುಂಡಗೋಡ ತಾಲೂಕಿಗೆ ಕರಾಳ ಗುರುವಾರ, ಕೋವಿಡ್ ನಿಂದ ಒಂದೇ ದಿನ 5ಜನ ಸಾವು

 ಕೋವಿಡ್ ಎರಡನೇ ಅಲೆಯು ತೀವ್ರತೆ ಪಡೆದುಕೊಂಡಿದೆ. ಮುಂಡಗೋಡ ತಾಲೂಕಿನಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಕೋವಿಡ್ ನಿಂದ ಒಟ್ಟು 5ಜನ ಮೃತಪಟ್ಟಿದ್ದಾರೆ. ಇದರಲ್ಲಿ ಕಾತೂರ ಗ್ರಾಮದ ಬಿಜೆಪಿ ಮುಖಂಡರೊಬ್ಬರೂ ಸಹ ಕೋವಿಡ್ ನಿಂದ ಮೃತಪಟ್ಟಿದ್ದಾರೆ. ಮಳಗಿ ಗ್ರಾಮದ 39 ವರ್ಷದ ಸೋಂಕಿತರೊಬ್ಬರು ಗುರುವಾರ ಸಂಜೆ ಕೋವಿಡ್ ನಿಂದ ಮೃತಪಟ್ಟಿದ್ದಾರೆ. 

ಕೋವಿಡ್ 2ನೇ ಅಲೆಯಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿತರು ಆಗುತ್ತಿರುವುದು ಒಂದೆಡೆಯಾದರೆ, ಸಾವಿನ ಪ್ರಮಾಣವೂ ಏರಿಕೆಯಾಗುತ್ತಿದೆ. ಇದರಿಂದ ಮನೆಯಿಂದ ಹರಬರುವ ಮುನ್ನ ಹತ್ತು ಬಾರಿ ಯೋಚಿಸಬೇಕಾಗಿದೆ. ತೀರಾ ಹೊರಗೆ ಹೋಗಲೇಬೇಕು ಎನ್ನುವಂತ ಕೆಲಸವಿದ್ದರೆ ಮಾತ್ರ ಸಾರ್ವಜನಿಕರು ಮನೆಯಿಂದ ಹೊರಗೆ ಬರಬೇಕು. ಸೋಂಕು ಹರಡುವ ಪ್ರಮಾಣವೂ ತೀವ್ರಗೊಂಡಿದೆ. ಕಳೆದ ಒಂದು ವಾರದಲ್ಲಿ ವರದಿಯಾದ ಸೋಂಕಿತರ ಸಂಖ್ಯೆ ನೋಡಿದರೆ, ಸೋಂಕಿನ ಪ್ರಮಾಣ ಏರುಗತಿಯಲ್ಲಿರುವುದನ್ನು ಕಾಣಬಹುದಾಗಿದೆ.

ಕೋವಿಡ್ ನಿಂದ ಮೃತಪಟ್ಟ ಮಹಿಳೆಯ ಅಂತ್ಯಸಂಸ್ಕಾರವನ್ನು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸಂಗನಬಸಯ್ಯ ಹಾಗೂ ಸಿಬ್ಬಂದಿ ನೆರವೇರಿಸಿದರು