Ticker

6/recent/ticker-posts

264 ಜನರು ಮನೆಯಲ್ಲಿ ಚಿಕಿತ್ಸೆ!!

ಮುಂಡಗೋಡ ತಾಲೂಕಿನಲ್ಲಿ ಶುಕ್ರವಾರ 25ಜನರಿಗೆ ಕೋವಿಡ್ ಸೋಂಕು ತಗುಲಿದೆ.
ಭಾರತ ಮಿಲ್ ಕೋಡಂಬಿಯಲ್ಲಿ 3 ಜನರಿಗೆ, ನ್ಯಾಸರ್ಗಿ ಕಾಲೋನಿ 3, ನಂದಿಕಟ್ಟಾ 2, ಓಣಿಕೇರಿ 2, ಮಳಗಿ 2, ಉಗ್ಗಿನಕೇರಿ 1, ಅಗಡಿ 1, ಬಾಚಣಕಿ 1, ಹನುಮಾಪುರ 1, ಇಂದಿರಾನಗರ ಕೊಪ್ಪ 1, ಕೊಪ್ಪ 1, ಇಂದೂರ ಗ್ರಾಮದಲ್ಲಿ ಒಬ್ಬರಿಗೆ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಒಟ್ಟು 19 ಜನರಿಗೆ ಕೊರೊನಾ ಸೋಂಕು ತಗುಲಿದೆ. 




ಮುಂಡಗೋಡ ಪಟ್ಟಣದಲ್ಲಿ ಸ್ವಲ್ಪ ಮಟ್ಟಿಗೆ ಇಳಿಕೆಯಾದಂತೆ ಕಂಡುಬಂದಿದೆ. ಪಟ್ಟಣದ  ಐದು ಜನರಿಗೆ ಶುಕ್ರವಾರ ಕೋವಿಡ್ ಖಚಿತಗೊಂಡಿದೆ. ಅದರಲ್ಲಿ  ಗಾಂಧಿನಗರ 3, ಕಿಲ್ಲೆ ಓಣಿಯ ಇಬ್ಬರಿಗೆ ಸೋಂಕು ದೃಢಪಟ್ಟಿದೆ. 
 264 ಜನರು ಮನೆಯಲ್ಲಿ ಚಿಕಿತ್ಸೆ: ತಾಲೂಕಿನಲ್ಲಿ ಇಲ್ಲಿಯವರೆಗೆ 3424 ಜನರು ಕೋವಿಡ್ ಸೋಂಕಿಗೆ ಒಳಗಾಗಿದ್ದಾರೆ. ಇದರಲ್ಲಿ 3018 ಜನರು ಗುಣಮುಖರಾಗಿದ್ದಾರೆ. ಸದ್ಯ 361 ಜನರು ಚಿಕಿತ್ಸೆ ಪಡೆಯುತ್ತಿದ್ದು, ಅದರಲ್ಲಿ 284 ಜನರು ಹೋಂ ಐಸೋಲೇಸನ್ ನಲ್ಲಿ ಇದ್ದಾರೆ. 73ಜನರು ಕೋವಿಡ್ ಕೇರ್ ಸೆಂಟರನಲ್ಲಿದ್ದಾರೆ. 24ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.