Ticker

6/recent/ticker-posts

ಮುಂಡಗೋಡ ತಾಲೂಕಿನಲ್ಲಿ 20894 ಜನರಿಗೆ ಕೋವಿಶೀಲ್ಡ್ ಲಸಿಕೆ...!

ಮುಂಡಗೋಡ ತಾಲೂಕಿನಲ್ಲಿ ಮೇ.29ರವರೆಗೆ ಒಟ್ಟು 20894 ಜನರು ಕೋವಿಶೀಲ್ಡ್ ಲಸಿಕೆ ಪಡೆದಿದ್ದಾರೆ.
ತಹಶೀಲ್ದಾರ್ ಶ್ರೀಧರ ಮುಂದಲಮನಿ ಅವರು, ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಮಾಹಿತಿ ಲಭ್ಯವಾಗಿದೆ.
ಇಲ್ಲಿಯವರೆಗೆ ಮೊದಲ ಡೋಸ್ ಪಡೆದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಒಟ್ಟು 16137 ಜನರು ಮೊದಲ ಡೋಸ್ ಪಡೆದವರಿದ್ದಾರೆ. 4757 ಜನ ಮಾತ್ರ ಎರಡೂ ಡೋಸ್ ಪಡೆದವರಿದ್ದಾರೆ. ಕೋವಿಡ್ ಎರಡನೇ ಅಲೆಯ ಆರ್ಭಟ ಜೋರಾದಂತೆ ಲಸಿಕೆ ಪಡೆಯುವರ ಸಂಖ್ಯೆಯಲ್ಲಿ ಏರಿಕೆಯಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಮೇ.29ರಂದು ಒಂದೇ ದಿನ 190ಜನರು ಕೋವಿಶೀಲ್ಡ್ ಲಸಿಕೆ ಪಡೆದಿರುವುದು ವಿಶೇಷ!


         ತಹಶೀಲ್ದಾರ್ ಶ್ರೀಧರ ಮುಂದಲಮನಿ

361ಸಕ್ರಿಯ ಪ್ರಕರಣಗಳು:ಇನ್ನೂ ಕೋವಿಡ್ ವಿಷಯಕ್ಕೆ ಬರುವುದಾದರೆ, ಮುಂಡಗೋಡ ತಾಲೂಕಿನಲ್ಲಿ ಶನಿವಾರದವರೆಗೆ  ಒಟ್ಟು 361 ಕೋವಿಡ್ ಸೋಂಕಿತರು ಮನೆ ಹಾಗೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕಿನಲ್ಲಿ ಇಲ್ಲಿಯವರೆಗೆ 55ಜನರು ಕೋವಿಡ್ ನಿಂದ ಮೃತಪಟ್ಟಿದ್ದಾರೆ. 3434 ಜನ ಸೋಂಕಿತರಲ್ಲಿ 3018ಜನರು ಗುಣಮುಖರಾಗಿರುವುದು ಸಮಾಧಾನ ಪಡುವಂತ ವಿಷಯ.