Ticker

6/recent/ticker-posts

ಕೋವಿಡ್ ಲಸಿಕೆಗೆ ಹೆಚ್ಚಿದ ಬೇಡಿಕೆ, ಸರದಿಯಲ್ಲಿ ನಿಂತ 18-44ವರ್ಷ ಒಳಗಿನ ಜನರು

18-44 ವರ್ಷ ಒಳಗಿನ ಜನರು ಕೋವಿಡ್ ಲಸಿಕೆ ಹಾಕಿಸಿಕೊಳ್ಳಲು ಮುಂಡಗೋಡದ ತಾಲೂಕಾ ಆಸ್ಪತ್ರೆಯಲ್ಲಿ ಸರದಿಯಲ್ಲಿ ನಿಂತಿರುವ ದೃಶ್ಯ ಗುರುವಾರ ಕಂಡುಬಂತು.
 ಕಳೆದೆರಡು ದಿನಗಳ ಹಿಂದೆ ಆರಂಭಗೊಂಡಿರುವ ಮೂರನೇ ಹಂತದ ಲಸಿಕಾ ಕಾರ್ಯಕ್ರಮಕ್ಕೆ ಜನರಿಂದ ಹೆಚ್ಚಿನ ಬೇಡಿಕೆ ವ್ಯಕ್ತವಾಗಿದೆ. 
ಈ ಹಿಂದೆ 45 ವರ್ಷ ಹಾಗೂ 60ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮ ಆರಂಭಿಸಿದ್ದರೂ, ಜನರಿಂದ ಅಷ್ಟೊಂದು ಪ್ರತಿಕ್ರಿಯೆ ಬಂದಿರಲಿಲ್ಲ. ಆದರೆ ಕೋವಿಡ್ ಎರಡನೇ ಅಲೆ ಯಾವಾಗ ತೀವ್ರ ಸ್ವರೂಪ ಪಡೆಯುತ್ತ ಸಾಗಿತೋ, ಆಗ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಲು ಮುಂದಾದರು. ಆದರೆ ಲಸಿಕೆಯ ಲಭ್ಯತೆ ಹಾಗೂ ಬೇಡಿಕೆಯಲ್ಲಿ ಭಾರಿ ಪ್ರಮಣದ ವ್ಯತ್ಯಾಸ ಆಗಿರುವುದರಿಂದ, ಲಸಿಕೆಯು ಎಲ್ಲರಿಗೂ ಈಗಲೆ ಸಿಗುತ್ತದೆ ಎಂದು ಹೇಳಲು ಆಗದು ಎನ್ನುತ್ತಾರೆ ಆರೋಗ್ಯ ಸಿಬ್ಬಂದಿ.
ಲಸಿಕೆ ಹಾಕಿಸಿಕೊಳ್ಳುತ್ತಿರುವ ಯುವಕ