Ticker

6/recent/ticker-posts

ಅಡಿಕೆ ತೋಟಕ್ಕೆ ನುಗ್ಗಿ ಬೆಳೆ ಹಾನಿ ಮಾಡಿದ ಕಾಡು ಹಂದಿಗಳು

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಗದ್ದೆಗಳಲ್ಲಿ ಕಾಡು ಹಂದಿಗಳು ದಾಳಿ ಮಾಡಿ ಎರಡು ನೂರಕ್ಕೂ ಹೆಚ್ಚು ಗಿಡಗಳನ್ನು ಹಾನಿ ಮಾಡಿದ ಘಟನೆ ಬುಧವಾರ ಜರುಗಿದೆ.
ಶಿವಲಿಂಗಪ್ಪ ಕಳಸಗೇರಿ ಎಂಬುವರ ಸರ್ವೇ ನಂಬರ 52 ರಲ್ಲಿ  ಬೆಳೆದ 175 ಮೂರು ವರ್ಷದ ಅಡಿಕೆ ಗಿಡಗಳು ಹಾಗೂ ಬಸಪ್ಪ ಕಳಸಗೇರಿ ಎಂಬುವವರ ಸರ್ವೇ ನಂಬರ 53 ರಲ್ಲಿಯ 50 ಕ್ಕೂ ಹೆಚ್ಚು ಎರಡು ವರ್ಷದ ಅಡಿಕೆ ಗಿಡಗಳನ್ನು ಅರಣ್ಯದ ಅಂಚಿನಲ್ಲಿರುವ ತೋಟಗಳಿಗೆ ಕಾಡು ಹಂದಿಗಳು ದಾಳಿ ಮಾಡಿ ಅಡಿಕೆ ಗಿಡಗಳನ್ನು ತಿಂದು ತುಳಿದು ಅಡಿಕೆ ದಂಟಿನ ರಸವನ್ನು ಕುಡಿದು ತಿಂದು ಲಕ್ಷಾಂತರ ರೂಪಾಯಿ ಬೆಲೆಬಾಳುವ ತೋಟದಲ್ಲಿನ ಅಡಿಕೆ ಗಿಡಗಳನ್ನು ಹಾನಿಮಾಡಿವೆ. ಎರಡು ಮೂರು ವರ್ಷಗಳಿಂದ ಕಷ್ಟಪಟ್ಟು ಬೆಳೆದ ಬೆಳೆಯನ್ನು ಹಾನಿ ಮಾಡಿವೆ ಎಂದು ರೈತರು ತಮ್ಮ ಅಳಲನ್ನು ತೋಡಿಕೊಂಡರು.

ಸನವಳ್ಳಿ ಗ್ರಾಮದ ರೈತ ಮುಖಂಡ ನಾಗರಾಜ ಗುಬ್ಬಕ್ಕನವರ ಮಾತನಾಡಿ, ಕಳೆದ ಎರಡು ಮೂರು ವರ್ಷಗಳಿಂದ ಕಾಡು ಹಂದಿಗಳು ರೈತರ  ಬೆಳೆಗಳ ಮೇಲೆ ದಾಳಿ ಮಾಡುತ್ತಿವೆ. ಈ ಬಗ್ಗೆ ಅರಣ್ಯ ಇಲಾಖೆಗೆ ಹಲವು ಬಾರಿ ದೂರು ನೀಡಿದರು. ಯಾವುದೆ ಪ್ರಯೋಜನ ಆಗಿಲ್ಲಾ ಹೇಗಾದರು ಮಾಡಿ ಸಂಬಂಧಿಸಿದ ಅಧಿಕಾರಿಗಳು ಕಾಡು ಹಂದಿಗಳಿಂದ ರೈತರಿಗೆ ಆಗುವ ತೊಂದರೆಗಳಿಗೆ ಕಡಿವಾಣ ಹಾಕಬೇಕಾಗಿದೆ ಎಂದರು